|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಳ್ವಾಸ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಆಳ್ವಾಸ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಜೆಇಇ ಎರಡನೇ ಫೇಸ್ ಫಲಿತಾಂಶ ಪ್ರಕಟ



ಮೂಡುಬಿದಿರೆ: ಏಪ್ರಿಲ್‌ನಲ್ಲಿ ನಡೆದ ಜೆಇಇ ಎರಡನೇ ಚರಣದ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ.  ಕಾಲೇಜಿನ ಹೆಚ್ ಆರ್ ರಜತ್ 99.6655363 ಪರ್ಸಂಟೈಲ್ ಪಡೆದರೆ, ಪ್ರಶಾಂತ 99.1289068 ಪರ್ಸಂಟೈಲ್,  ಹಾಗೂ ಪ್ರಜ್ವಲ್ ಚೌಧರಿ ನಂದೇಲಾ 99.0154909 ಪರ್ಸಂಟೈಲ್  ಪಡೆದಿರುತ್ತಾರೆ. ಕೆಟಗರಿ ವಿಭಾಗದಲ್ಲಿ ಆಕಾಶ್ ಬಸವರಾಜ್ ಬುಲ್ಲಮ್ಮನ್ನವರ್ ರಾಷ್ಟ್ರ ಮಟ್ಟದಲ್ಲಿ 290ನೇ ರ‍್ಯಾಂಕ್ ಪಡೆದರೆ, ಪ್ರಥಮ್ ಎಸ್ 425ನೇ ರ‍್ಯಾಂಕ್,  ಆರ್ ರಕ್ಷಿತಾ 865ನೇ ರ‍್ಯಾಂಕ್ ಗಳಿಸಿರುತ್ತಾರೆ.  


98 ಪರ್ಸಂಟೈಲ್‌ಗಿಂತ ಅಧಿಕ 14 ವಿದ್ಯಾರ್ಥಿಗಳು, 97 ಪರ್ಸಂಟೈಲ್‌ಗಿಂತ ಅಧಿಕ 34 ವಿದ್ಯಾರ್ಥಿಗಳು, 96 ಪರ್ಸಂಟೈಲ್‌ಗಿಂತ ಅಧಿಕ 68, 95 ಪರ್ಸಂಟೈಲ್‌ಗಿಂತ 120, ಹಾಗೂ 234 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.  


ಭೌತಶಾಸ್ತ್ರ ವಿಷಯದಲ್ಲಿ 2 ವಿದ್ಯಾರ್ಥಿಗಳು 100 ಪರ್ಸಂಟೈಲ್ ಪಡೆದರೆ, 24 ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದು ಸಾಧನೆ ಮೆರೆದಿದ್ದಾರೆ.


ರಸಾಯನಶಾಸ್ತ್ರ ವಿಷಯದಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ 48 ವಿದ್ಯಾರ್ಥಿಗಳು,  ಗಣಿತ ವಿಷಯದಲ್ಲಿ 99 ಪರ್ಸಂಟೈಲ್‌ಗಿಂತ 5 ವಿದ್ಯಾರ್ಥಿಗಳು ಅಂಕ ಪಡೆದು ಸಾಧನೆ ಮೆರೆದಿದ್ದಾರೆ.  

ವಿದ್ಯಾರ್ಥಿಗಳ ಸಾದನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 تعليقات

إرسال تعليق

Post a Comment (0)

أحدث أقدم